ಬಾಳೆಹಣ್ಣಿನ ಸಿಪ್ಪೆ ಎಸೆಯುವ ಮುನ್ನ ಯೋಚಿಸಿ!

ಬಾಳೆಹಣ್ಣಿನ ಸಿಪ್ಪೆಯ ಉಪಯೋಗದ ಬಗ್ಗೆ ತಿಳಿದರೆ ನೀವು ಎಂದಿಗೂ ಸಿಪ್ಪೆ ಬಿಸಾಡುವುದಿಲ್ಲ!

Last Updated : Jun 11, 2019, 05:01 PM IST
ಬಾಳೆಹಣ್ಣಿನ ಸಿಪ್ಪೆ ಎಸೆಯುವ ಮುನ್ನ ಯೋಚಿಸಿ! title=
Image courtesy: Pixabay

ಬೆಂಗಳೂರು: ಬಾಳೆಹಣ್ಣು ಆರೋಗ್ಯಕ್ಕೆ ಹೆಚ್ಚು ಪ್ರಯೋಜನ ನೀಡುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಬಹುಶಃ ವಿಶ್ವದಾದ್ಯಂತ ಅತಿ ಹೆಚ್ಚು ಜನ ಸೇವಿಸುವ ಹಣ್ಣೂ ಕೂಡ ಇದಾಗಿದೆ. ಶಕ್ತಿ ಸಮೃದ್ಧವಾಗಿರುವ ಈ ಹಣ್ಣು ಇತರೆ ಹಣ್ಣುಗಳಿಗೆ ಹೋಲಿಸಿದರೆ ಕಡಿಮೆ ದರದಲ್ಲಿ ಸಿಗುತ್ತದೆ. 

ಬಾಳೆಹಣ್ಣು ಆರೋಗ್ಯಕ್ಕೆ ಉತ್ತಮ ಎಂದು ಅದನ್ನು ಸೇವಿಸುವ ನಾವು, ಬಾಳೆ ಹಣ್ಣಿನ ಸಿಪ್ಪೆಯನ್ನು ಮಾತ್ರ ಎಸೆದು ಬಿಡುತ್ತೇವೆ. ಆದರೆ ಬಾಳೆಹಣ್ಣಿನ ಸಿಪ್ಪೆಯಿಂದಲೂ ಹಲವು ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ?

ಬಾಳೆಹಣ್ಣಿನ ಸಿಪ್ಪೆಯ ಉಪಯೋಗದ ಬಗ್ಗೆ ತಿಳಿದರೆ ನೀವು ಎಂದಿಗೂ ಸಿಪ್ಪೆ ಬಿಸಾಡುವುದಿಲ್ಲ!

ಹಲ್ಲುಗಳನ್ನು ಬಿಳಿಯಾಗಿಸಲು:
ಹಲವು ಮಂದಿಗೆ ಹಲ್ಲು ಹಳದಿಯಾಗಿ ಕಾಣುವುದೇ ದೊಡ್ಡ ಸಮಸ್ಯೆಯಾಗಿರುತ್ತದೆ. ಅಂತಹವರು ಎರಡು ವಾರಗಳ ಕಾಲ ಬಾಳೆಹಣ್ಣಿನ ಸಿಪ್ಪೆಯಿಂದ ನಿಮ್ಮ ಹಲ್ಲನ್ನು ಚೆನ್ನಾಗಿ ಉಜ್ಜಿ. ಇದರಿಂದ ನೀವು ಶೀಘ್ರದಲ್ಲೇ ಕೆಲವು ಫಲಿತಾಂಶಗಳನ್ನು ನೋಡಲು ಪ್ರಾರಂಭಿಸುವಿರಿ.

ಚರ್ಮದ ನರಹುಲಿ(ನೀರುಳಿ) ಸಮಸ್ಯೆಗೆ ರಾಮಬಾಣ:
ನರಹುಲಿ(ನೀರುಳಿ) ಎಂಬುದು ಹೆಚ್ಚಿನವರಲ್ಲಿ ಕಂಡುವರುವ ಸಾಮಾನ್ಯ ಚರ್ಮದ ಸಮಸ್ಯೆಯಾಗಿದೆ. 
ನೀವೂ ಚರ್ಮದ ನರಹುಲಿಗಳನ್ನು ಹೊಂದಿದ್ದರೆ, ಬಾಳೆ ಸಿಪ್ಪೆಯೊಂದಿಗೆ ಈ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಬಹುದು. ಸರಳವಾಗಿ ನರಹುಲಿ ಮೇಲೆ ಸಿಪ್ಪೆಯನ್ನು ಇಟ್ಟು ಉಜ್ಜಿರಿ. ಇದರಿಂದ ನರಹುಲಿಗಳನ್ನು ತೆಗೆದುಹಾಕುವುದರ ಜೊತೆಗೆ ಭವಿಷ್ಯದಲ್ಲಿ ಇದು ನಿಮ್ಮ ಚರ್ಮದ ಮೇಲೆ ಕಾಣಿಸಿಕೊಳ್ಳುವುದನ್ನು ತಡೆಯುತ್ತದೆ.

ಮೊಡವೆ ಮತ್ತು ಸುಕ್ಕುಗಳು:
ಚರ್ಮದ ಆರೈಕೆಗಾಗಿ ಬಾಳೆಹಣ್ಣು ಅದ್ಭುತವಾಗಿದೆ. ನಿಮ್ಮ ಚರ್ಮದ ಮೇಲೆ ಬಾಳೆಹಣ್ಣಿನ ಸಿಪ್ಪೆ ಸವರಿಕೊಂಡು, ನಿರ್ದಿಷ್ಟವಾಗಿ ಸಮಸ್ಯಾತ್ಮಕ ಪ್ರದೇಶಗಳಲ್ಲಿ 30 ನಿಮಿಷಗಳ ಕಾಲ ಬಿಡಿ. ನೀವು ವ್ಯತ್ಯಾಸವನ್ನು ನೋಡುವವರೆಗೂ ಪ್ರತಿದಿನ ಇದನ್ನು ಮುಂದುವರೆಸಿ.

ಬಾಳೆಹಣ್ಣಿನ ಸಿಪ್ಪೆಯು ನಿಮ್ಮ ಚರ್ಮವನ್ನು ಹೈಡ್ರೀಕರಿಸುವಂತೆ ಮಾಡುತ್ತದೆ. ಬಾಳೆ ಸಿಪ್ಪೆಗೆ ಮೊಟ್ಟೆಯ ಹಳದಿ ಭಾಗವನ್ನು ಸೇರಿಸಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ಮುಖದ ಮೇಲೆ ಹಾಕಿ 5 ನಿಮಿಷದ ನಂತರ ಅದನ್ನು ತೊಳೆಯಿರಿ.

ಸೋರಿಯಾಸಿಸ್ ಚಿಕಿತ್ಸೆ:
ಸೋರಿಯಾಸಿಸ್ ಪೀಡಿತ ಪ್ರದೇಶದಲ್ಲಿ ಸಿಪ್ಪೆ ಅನ್ವಯಿಸಿ. ಬಾಳೆಹಣ್ಣು ಸಿಪ್ಪೆ ತೇವಾಂಶವುಳ್ಳ ಗುಣಲಕ್ಷಣಗಳನ್ನು ಹೊಂದಿದ್ದು, ಇದು ತ್ವರಿತವಾಗಿ ಸೋರಿಯಾಸಿಸ್ ಗುಣಪಡಿಸುತ್ತದೆ ಮತ್ತು ನೀವು ಇದರ ಗಮನಾರ್ಹ ಫಲಿತಾಂಶಗಳನ್ನು ನೋಡಬಹುದು.

UV ಪ್ರೊಟೆಕ್ಷನ್:
ಹಾನಿಕಾರಕ ಯುವಿ ಕಿರಣಗಳಿಂದ ಕಣ್ಣುಗಳನ್ನು ರಕ್ಷಿಸುವಲ್ಲಿ ಬಾಳೆ ಸಿಪ್ಪೆ ಸಹಾಯ ಮಾಡುತ್ತದೆ. ನಿಮ್ಮ ಕಣ್ಣುಗಳ ಮೇಲೆ ಬಾಳೆ ಸಿಪ್ಪೆಯನ್ನು ಉಜ್ಜುವ ಮೊದಲು ನೀವು ಸೂರ್ಯನ ಕೆಳಗೆ ಸಿಪ್ಪೆಯನ್ನು ಬಿಡಿ ಎಂದು ಖಚಿತಪಡಿಸಿಕೊಳ್ಳಿ. ಇದು ಕಣ್ಣಿನ ಪೊರೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯಕವಾಗಿದೆ.

ಕೆಲವು ಪ್ರಮುಖ ಸಲಹೆಗಳು:

  • ಉತ್ತಮ ಫಲಿತಾಂಶಕ್ಕಾಗಿ ತಾಜಾ ಬಾಳೆಹಣ್ಣಿನ ಸಿಪ್ಪೆಗಳನ್ನು ಬಳಸಿ.
  • ದೀರ್ಘಕಾಲದವರೆಗೆ ಸಿಪ್ಪೆ ಸುಲಿದ ಬಾಳೆಹಣ್ಣು ಇರಿಸಬೇಡಿ. ಸಿಪ್ಪೆ ಸುಲಿದ ನಂತರ ತಕ್ಷಣ ಸೇವಿಸಿ. ಅಂತೆಯೇ ಸಿಪ್ಪೆಯನ್ನು ತಕ್ಷಣವೇ ಬಳಸಬೇಕು.
  • ಬಾಳೆಹಣ್ಣುಗಳನ್ನು ತಂಪಾದ, ಶುಷ್ಕ ಸ್ಥಳದಲ್ಲಿ ಸಂಗ್ರಹಿಸಿ, ಯಾವಾಗಲೂ ಶಾಖ ಅಥವಾ ಸೂರ್ಯನ ಬೆಳಕಿನಿಂದ ದೂರವಿರಿಸಿ.
  • ರೆಫ್ರಿಜರೇಟರ್ನಲ್ಲಿ ಬಾಳೆಹಣ್ಣಿನ ಸಿಪ್ಪೆಯನ್ನು ಇಡಬೇಡಿ.

Trending News